Thursday, March 8, 2012

ಸ್ತ್ರೀಗೊಂದು ದಿನ ಬೇಕೇ..??

ಹುಟ್ಟಿನಿಂದ ಸಾವಿನ ವರೆಗೂ ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಒಂದೊಂದು ಪಾತ್ರ ನಿರ್ವಹಿಸುತ್ತಾ., ಅವನ ಏಳಿಗೆಗೆ ಕಾರಣಳಾಗಿರುವ ಮಹಿಳೆಗೆ ಒಂದು ದಿನವನ್ನು ಮೀಸಲಿಡುವ ಅಗತ್ಯವಿದೆಯೇ..? ಪ್ರತಿ ದಿನ, ಪ್ರತಿ ಕ್ಷಣ ಅವಳ ಅಗತ್ಯ ಇದ್ದೆ ಇದೆ.. ಸ್ತ್ರೀ ಯಿಂದಲೇ ಈ ಜಗತ್ತು, ಅವಳಿಂದಲೇ ಜೀವ, ಅವಳಿಂದಲೇ ಭಾವ.. ಮಹಿಳಾ ದಿನಾಚರಣೆಯ ನೆಪದಲ್ಲಿ ಕೇವಲ ಒಂದು ದಿನ ಅವಳನ್ನು ಅಭಿನಂದಿಸುವ ಬದಲು ಪ್ರತಿ ನಿತ್ಯ ಅವಳನ್ನು ಗೌರವಿಸುತ್ತಾ, ಅವಳಿಗೆ ರಕ್ಷೆ ನೀಡೋಣ..


ಗರ್ಭವೆಂಬ ಸ್ವರ್ಗದಲ್ಲಿ.,
ನವಮಾಸ ಹೊತ್ತುಕೊಂಡು.,
ಜೀವ ಕೊಟ್ಟು ಧರೆಗೆ ತಂದು.,
ಎದೆಯ ಹಾಲನುಣಿಸಿ ಬೆಳೆಸೋ.,
ಜೀವದಾತೆ ತಾಯಿ ನಮ್ಮ ದೇವರಲ್ಲವೇ..?
ಅವಳು ಸ್ತ್ರೀಯಲ್ಲವೇ..??

ಅಡ್ಡ ದಾರಿ ಹಿಡಿಯುತಿರಲು.,
ಬೆನ್ನಿಗೊಂದು ಗುದ್ದು ಕೊಟ್ಟು.,
ಅಳಲು ಒಡನೆ ಬಳಿಗೆ ಬಂದು.,
ಕೆನ್ನೆಗೊಂದು ಮುದ್ದು ಕೊಟ್ಟು.,
ಅಕ್ಕರೆಯಾ ತೋರುವವಳು ಅಕ್ಕ ಅಲ್ಲವೇ..?
ಅವಳು ಸ್ತ್ರೀಯಲ್ಲವೇ..??

ಸಕ್ಕರೆಯಾ ಗೊಂಬೆಯವಳು.,
ನಕ್ಕರೆ ಸವಿ ಜೇನಿನಂತೆ.,
ಮುದ್ದು ಮುದ್ದು ಮಾತನಾಡಿ.,
ದೂರ ಮಾಡಿ ಮನದ ಚಿಂತೆ.,
ಜೊತೆಯಿರುವ ಕಿನ್ನರಿಯೇ ತಂಗಿಯಲ್ಲವೇ..?
ಅವಳು ಸ್ತ್ರೀಯಲ್ಲವೇ..??

ಒಡಲ ಸುಡುವ ನೋವೆ ಇರಲಿ.,
ಅಳುವ ಮರೆಸೋ ನಲಿವೆ ಬರಲಿ.,
ಕಷ್ಟ-ಸುಖದಿ ಭಾಗಿಯಾಗಿ.,
ಕಣ್ಣನೊರೆಸಿ ಸ್ಥೈರ್ಯ ತುಂಬಿ.,
ಬೆನ್ನು ತಟ್ಟಿ ಮುನ್ನಡೆಸುವಳು ಗೆಳತಿಯಲ್ಲವೇ..?
ಅವಳು ಸ್ತ್ರೀಯಲ್ಲವೇ..??

ಹುಟ್ಟು ಮನೆಯ ಬಿಟ್ಟು ಬಂದು.,

ಕೊಟ್ಟ ಮನೆಗೆ ಬೆಳಕು ತಂದು.,
ದೇಹ-ಮನಸ ಹಂಚಿಕೊಂಡು.,
ಸೇವೆಯಲ್ಲೇ ಸುಖವ ಕಂಡು.,
ಕೊನೆವರೆಗೂ ಜೊತೆ ನಡೆವಳು ಮಡದಿಯಲ್ಲವೇ..?
ಅವಳು ಸ್ತ್ರೀಯಲ್ಲವೇ..??

ಎದೆಯ ಗೂಡ ಪಂಜರದಲಿ.,
ಬಂಧಿಯಾದ ಪ್ರಾಣಪಕ್ಷಿ.,
ದೇಹದಿಂದ ಮುಕ್ತಗೊಂಡು.,
ಉಸಿರು ಹರಿದು ಸಾವು ಬರಲು.,
ತನ್ನೊಡಲಲಿ ಜಾಗ ಕೊಡುವವಳು ಭೂಮಿಯಲ್ಲವೇ..?
ಅವಳು ಸ್ತ್ರೀಯಲ್ಲವೇ..??


**ನೆನಪಿನ ದೋಣಿಯ ನಾವಿಕ**

Tuesday, January 17, 2012

"ಫೇಸ್ ಬುಕ್ ನಲ್ಲೊಂದು ಕ್ಯೂಟ್ ಲವ್ ಸ್ಟೋರಿ"..


ಹೇಳ್ತೀನಿ ಕೇಳ್ತೀರಾ....??
ಅವನೊಬ್ಬ ಕೆಲಸ ಕಾರ್ಯ ಇಲ್ಲದ ಹುಡುಗ.. ಅಪ್ಪ ಏನೋ ಬೇಜಾನ್ ಮಾಡಿಟ್ಟಿದ್ರು, ಅದಕ್ಕೆ ದಿನಾ ಆರ್ಕುಟ್ ಮತ್ತೆ ಫೇಸ್ ಬುಕ್ ನಲ್ಲಿ ಹರಟೆ ಹೊಡಿತಾ ಟೈಮ್ ಪಾಸ್ ಮಾಡ್ತಿದ್ದ.. ಆಗ ಅವನಿಗೊಬ್ಬಳು ಹುಡುಗಿ ಫ್ರೆಂಡ್ ಆದ್ಲು.. ಅವಳಿಗೂ ಮಾಡೋಕೇನು ಕೆಲ್ಸ ಇರಲಿಲ್ಲ ಅಂತಾನೆ ಇಟ್ಕೊಳ್ಳಿ.. ಯಾವಾಗಲು ಕಂಪ್ಯೂಟರ್ ಮುಂದೆ ಕೂತ್ಕೊಂಡು ಪಟ ಪಟ ಅಂತ ಕೀ ಬೋರ್ಡ್ ಕುಟ್ಟುತ್ತಾ ಚಾಟ್ ಮಾಡ್ತಾ ಇದ್ರು.. 

ಮುಂದೆ ಏನಾಯ್ತು...?? ನೀವೇ ಕೇಳಿ...**
 
 


ಡೈಲಿ ಆನ್ಲೈನ್ ಚಾಟು ಚಾಟು,
ಒನ್ ಡೇ ಪಾರ್ಕಲಿ ಆಯ್ತು ಮೀಟು..
ಫಸ್ಟ್ ಮೀಟಲ್ಲೇ ತಿಂದ್ರು ಚಾಕಲೇಟು,
ಫ್ರೆಂಡ್ಶಿಪ್ ಆಯ್ತು ಲವ್ ಗೆ ಕನ್ವರ್ಟು..

ಗರ್ಲು ಕೊಟ್ಳು ಲವ್ಲೀ ಲುಕ್ಕು,
ಆಹಾ ಹುಡುಗನದೇನು ಲಕ್ಕು..?
ಲವ್ವು ಹಾರ್ಟ್ ಗೆ ಕೊಡ್ತು ಕಿಕ್ಕು,
ಖಾಲಿ ಹುಡುಗನ ಚೆಕ್ಕು ಬುಕ್ಕು..

ಗರ್ಲು ಮಾಡಿದಳೊಂದು ಟೆಕ್ನಿಕ್ಕು,
ಲವ್ವಲಿ ಯಾಕೋ ತೆಗೆದಳು ಕಿರಿಕ್ಕು..
ಪಾಪ ಹುಡುಗನ ಬ್ಯಾಡು ಲಕ್ಕು,

ಗರ್ಲು ಹಾಕಿದ್ಳು ಲವ್ ಗೆ ಬ್ರೇಕು..

ಇವರಿಬ್ಬರ ಈ ಫ್ಲಾಪ್ ಸ್ಟೋರಿ ಗೆ,
ಸಾಕ್ಷಿ ಆಯ್ತು ಫೇಸುಬುಕ್ಕು..**ಆಮೇಲೆ...??
ಹುಡುಗ ಅವಳ ನೆನಪಲ್ಲೇ ಕೊರಗ್ತಾ, ದಾಡಿ ಬಿಟ್ಕೊಂಡು, ಕೈಯ್ಯಲ್ಲಿ ಬಾಟಲ್ ಹಿಡ್ಕೊಂಡು, ಕೊಲವೆರಿ ಸಾಂಗ್ ಹಾಡ್ತಾ ರೋಡ್ ರೋಡಲ್ಲಿ ಅಡ್ದಾಡ್ತಿದಾನೆ.....
ಅಂತ ಅಂದ್ಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ.. ಯಾಕಂದ್ರೆ ಅವ್ನು ನಮ್ಮೂರ್ ಹುಡ್ಗ  ರೀ..

ಕಿತ್ತು ಹೋಗಿರೋ ಜೀನ್ಸ್ ಪ್ಯಾಂಟು, ಬಟನ್ ಇಲ್ದೇ ಇರೋ ಷರ್ಟು..
ಕಲರ್ ಕಲರ್ ಕ್ಯಾನ್ವಾಸ್ ಷೂಸು, ಫುಟ್ ಪಾತ್ ನಲ್ಲಿ ಮಾರೋ ಕೂಲಿಂಗ್ ಗ್ಲ್ಯಾಸು..
ಹಾಕೊಂಡು ರೋಡ್ ಗೆ ಎಂಟ್ರಿ ಕೊಟ್ಟ ನೋಡಿ......**


ಬೆಂಗ್ಳೂರ್ ಹುಡುಗನ ಹಿಪ್-ಹಾಪ್ ಸ್ಟೈಲು,
ನೋಡಿ ಕೊಟ್ಳು ಇನ್ನೊಂದ್ ಗರ್ಲ್ ಸ್ಮೈಲು..
ಇವರಿಬ್ಬರ ನ್ಯೂ ಲವ್ ಸ್ಟೋರಿ ಗೆ,
ಹೆಲ್ಪು ಮಾಡಿತು ಒಂದು ಮೊಬೈಲು..

ಡೇ ಅಂಡ್ ನೈಟು ಫೋನು ಕಾಲು,
ಅಯ್ಯೋ ಲವ್ವಿದು ಐಲು-ಪೈಲು..
ಈಗ ಹುಡುಗ ಫುಲ್ಲು ಕಿಲಾಡಿ,
ಇನ್ನೊಬ್ಳ ನಂಬರ್ ಇಟ್ಕೊಂಡ ನೋಡಿ..

ಲವ್ ಮಾಡೋ ಹುಡುಗರೇ ಹುಷಾರಾಗಿರ್ರಿ,
ನಮ್ ಹುಡುಗನ ನೋಡಿ ಸ್ವಲ್ಪ ಕಲೀರಿ..
ಹುಡುಗಿ ಹೋದರೆ ಹೋಗಲಿ ಬಿಡ್ರಿ,
ಒಂದೇ ಲೈಫು ಎಂಜಾಯ್ ಮಾಡ್ರಿ..

ಲವ್ ಫೇಲ್ ಆದ್ರೆ ಡೋಂಟ್ ವರಿ..
ನಾವ್ ಹಿಂಗೆನೇ ವೆರಿ ವೆರಿ ಸಾರಿ...

***ನೆನಪಿನ ದೋಣಿಯ ನಾವಿಕ***